ಹೃದಯವು ಮುದುಡಿದೆ ;
ಮನಸ್ಸು ಮಾಗಿದೆ;
ಯಶಸ್ಸಿನ ರೆಕ್ಕೆಗಳು ಮುರಿದಿವೆ ;;
ಓ ನನ್ನ ಚೇತನ ನೀನೆಲ್ಲಿರುವೆ ?
ನೆರಳಿನಂತೆ ಹಿಂಬಾಲಿಸಿದ ಯಶಸ್ಸು ;
ಸಂಗಾತಿಯಂತ ಇದ್ದ ಸುಖ ;
ಬೆಳಕಿನಿಂದ ಕತ್ತಲದೆಡೆಗೆ ಏಕೆ ಹೋಗುತ್ತಿರುವೆ ?
ಓ ನನ್ನ ಚೇತನ ನೀನೆಲ್ಲಿರುವೆ ?
ನದಿಯಂತೆ ಸರಾಗವಾಗಿ ಹರಿಯುತ್ತಿದ್ದ ಈ ಜೀವಕೆ;
ಅಶಾಂತಿ , ಅನಾರೋಗ್ಯ ಎಂಬ ಬಂಡೆಗೆ ಅಪ್ಪಳಿಸಿ ;
ಈ ಜೀವ ಸತತವಾಗಿ ಮಾಗೇ ಹೋಯಿತೆ ?
ಓ ನನ್ನ ಚೇತನ ನೀನೆಲ್ಲಿರುವೆ ?
ಕಾಮನಬಿಲ್ಲಿನಂತೆ ಇದ್ದ ಈ ಆತ್ಮಕೆ ;
ಎಲ್ಲಿಂದಲೋ ಕಟ್ಟಲು ಆವರಿಸಿದೆಯೇ ?
ದೀಪದಂತೆ ಶಾಂತಿಯಾಗಿದ್ದ ಮನಸ್ಸನ್ನು , ಗಾಳಿ ನಾಂದಿ ಹಾಡಿದೆಯೇ?
ಓ ನನ್ನ ಚೇತನ ನೀನೆಲ್ಲಿರುವೆ ?
ಕಣ್ಣೀರು ಬತ್ತಿಹೋಗಿವೆ ;
ಕನಸುಗಳು ಕನಸಾಗಿಯೇ ಉಳಿಯುವವೆ?
ನಿರೀಕ್ಷೆಗಳು , ಆಸೆಗಳು ಮುಳುಗುತ್ತಿವೆಯೇ ?
ಓ ನನ್ನ ಚೇತನ ನೀನೆಲ್ಲಿರುವೆ ?
ಆಶಕ್ತಿಯಿಂದ ಶಕ್ತಿಯದೆಡೆಗೆ ;
ಅನಾರೋಗ್ಯದಿಂದ ಆರೋಗ್ಯದೆಡೆಗೆ ;
ಕಗ್ಗತ್ತಿಲಿಂದ ಸೂರ್ಯಪ್ರಕಾಶದೆಡೆಗೆ ಕರೆದೊಯ್ಯುವೆಯೇ ?
ಓ ನನ್ನ ಚೇತನ ನೀನೆಲ್ಲಿರುವೆ ?
My very first try for a kannada poem.
How many of you understand kannada here?